ಗೌಣ

ಅಣತೆಯ ಅಡಿ ಬೆಳಕ ಹುಡುಕೊ
ಮಳೆಮೋಡದ ನೆಲೆಯ ಹುಡುಕೊ
ಮಿಂಚುಹುಳದ ಕಥನ
ಮೌನ ಮನದ ಕವನ

ಜಗದ ವ್ಯವಹಾರ ಮರೆಸೊ
ಸಮಯದ ಉಪಹಾರ ಬಯಸೊ
ಹೃದಯ ಜನ್ಯ ಪ್ರೇಮ
ದೊರಕದಿದರ ಉಪಮ

ಕಂಗಳಲ್ಲೆ ಕಾವ್ಯ ರಚಿಸೊ
ತುಟಿಗಳ ನಿಜಕೃತವ ಕಲಿಸೊ
ಮನೋಕ್ತಿಯ ಪ್ರವಾಹ
ಶರಧಿ ಸವಿಯೊ ದಾಹ

ಗುಣಗಳ ಗೆರೆ ಗೌಣಮಾಡಿ
ಪ್ರಣಯದ ಗರಿ ಸಡಿಲಮಾಡಿ
ಅನುಮಾನವಳಿಸೊ ಆಟ
ಸೂತ್ರ ಕಡೆದ ಗಾಳಿಪಟ

ದೂರ ಸರಿದ ಕಾಂತದಂತೆ
ಎಲ್ಲೆಡೆ ಅದೆ‌ ಬ್ರಾಂತಿಯಂತೆ
ಅನುರಾಗವೆ ಗುರುತ್ವ
ಧರಣಿ ಪೊರೆಯೊ ತತ್ವ

Ghost

changes just happened
without asking me
I don’t need to recall anything
It’s just right within me

from womb to what I’m
I’ve died a trillion death
carrying all the ghosts
confused with my own self

even now if I stood there
visiting vivid past of me
the time that’ll never return
just haunts me on my grave

there’s a cry that can’t be heard
grief that only felt
longing for the distant comfort
what’s one more a death

-ANTi