ನೆನಪಿರಲಿ

​ಸಿಡಿಲೆರಗೆ ಮರವದು ಚೂರಾಗಲು

ಕಾಳು ಮಣ್ಣೊಳವೆತದ್ದು ನೂರಾಗಲು

ಪರಿಸರವಿದು ಇದೆ ಅದರ ಪರಿ

ಸರಿತಪ್ಪ ಸೆಣೆಸಲ್ಲ ನೆಪ್ಪೊಳಿರಲಿ..

Advertisements

ಕನಸ ವಾಸ್ತವ

ಕುಳಿತರಲ್ಲಿ ಚನ್ನ ಚನ್ನೆಯರು
ಬರುವವು ಕಥನಗಳ ಸಾಲು ನೂರಾರು
ಸಡಗರ – ಸಂಕಟಗಳ ಸರಮಾಲೆ,ತುಂತುರು

ಎಂತೆಥವೊ ಕನಸುಗಳು
ಎನಿತು ಚಂದವು ಎನಿಸಿ
ನೆನೆದೊಡನೆ ಮನವ ಪುಳಕಗೊಳಿಸಿ
ಸಂಚಯಿಸಿ ಮನದೊಡಲಲಿ ಭದ್ರಗೊಳಿಸಿರಲು
ಎರಗಿತೋ ಎದೆಯನೆ ಸೀಳ್ದ ಭರಸಿಡಿಲು
ಎಲ್ಲವ ಇಲ್ಲವನಾಗಿಸಿ
ಮಾನಸಸರೋವರವನೆ ಬರಡಾಗಿಸಿ

ಕ್ಷಣಕು ಮುನ್ನ ಕನಸಲೋಕದಲೆ ವಿಹಾರ
ಈಗ ನಿಂತ ನಿಲುವೆ ಕುಸಿಯುತಿರೆ ಇಲ್ಲವೂ ಆಧಾರ
ಮುಂದಡಿಯಿಡಲೆಜ್ಜೆಗೂ ಆತಂಕದ ಪಾಷ
ಮುಚ್ಚಿರಲು ದ್ವಾರಗಳು ಅವಕಾಶ ನಿಶ್ಶೇಷ

ಮುಂದೇನು ಕೇಡೇ ಕಾಲ್ಗೆಜ್ಜೆ ಕಟ್ಟಿರಲು
ಕುಣಿತವದರದೆ ಇನ್ನು ಕೆಡೆ ಮತಿಯ ಕಂದೀಲು
ಬಾಳಬಹುದೆ ಬೇಯುತಿಹ ಕಾನನದೊಳು ಪತಂಗ
ಕ್ಷಣ-ಕ್ಷಣಕು ನಿಚ್ಚಳವಾಗುತಿರೆ ಮರಣ ಮೃದಂಗ

ಎಚ್ಚರ-ಎಚ್ಚರ ದಿಗ್ಗನೆ ಅಚ್ಚರಿಯ ಬೆಳಕಾಯ್ತು
ಕನಸೊಳು ಕನಸ ಕಂಡದ್ದು ಅರಿವಾಯ್ತು
ಕಾಣ್ದ ಕನಸನೆ ಮರುನೆನೆಯಲು ಭಯವಾಗಿ
ಒಡಲೊಳಗಣ ಕೊಕೊಳ್ಳಿ ತಣಿವಾಗಿ ಕರಗಿ
ಬಡಬಡಿಸಿದ ಹೃದಯ ಲಯವಿಡಿದು ಸುಧಾರಿಸಿ
ಗೆಲುವಾಯ್ತು ಜೀವ ಹೊಸಚಿಲುಮೆ ಪಸರಿಸಿ

ಅಪ್ಪಿದಳು ಚನ್ನೆ ಚನ್ನನ ತನಮನದನ್ನನ
ಅರುಹುತಲಿ ತನ್ನನುಭವವನ ಬಿಗಿಗೊಳಿಸಿ ತೊಳ್ಬಂಧನ
ತುಸು ನಗೆ ಬೀರುತಲೆ ಚನ್ನ ಸರಿಸಿ ಮುಂಗುರುಳ
ಮುತ್ತಿಡುತ ಹಣೆಯತ್ತ ಸಮಾದಾನಿಸಿದನವಳ

ಬರಿ ಕನಸೆ ಇರಬಹುದು ಕೆಲವರಿಗೆ ಇದು
ಬಹಳರಿಗೆ ಆ ಘೋರ ವಾಸ್ತವವೆ ಒದಗಿಹುದು
ಆಶಿಸುತ ಅವರ ಸ್ಥಿತಿ ಸುಧಾರಿಸಲಿ
ಸಾಧ್ಯವಿರೆ ಅದು ಚನ್ನೆಯ ಕನಸಾಗಲಿ

ವರ

ಜಳಕ ಜಪ ತಪವನಾಚರಿಸಿ
ವರವದೊಂದ ಬೇಡಲು
ಭವಿಸಿತು ಬಯಸಿದುದೆಲ್ಲಾ
ಅಂದುಕೊಂಡಂತೆಲ್ಲ ಜರುಗಲು
ಹರುಷಕೆ ಪಾರವಿಲ್ಲ

ಕಳೆಯಲದೊಂದಷ್ಟು ಮಾಸ
ಮೂಡಿತದೇಕೋ ಅಪೂರ್ಣ ಭಾವವು
ಜೀವನದೆ ಹೊಸತೇನು ಇಲ್ಲ
ನೆನೆಸಿದಂತೆಲ್ಲ ಬದುಕೆ
ಜಾಗವದೆಲ್ಲಿ ಕೌತುಕಕೆ

ಪಾಕವ ರಸಮಯವಾಗಿಸಲೆಂದೇ
ತುಂಬಿಹುದು ಉಳಿ ಉಪ್ಪು ಖಾರ
ಬರಿಯ ಸಿಹಿಯನೊಂದೆ ಉಂಡವ
ರುಚಿಯ ಗುರುತಿಸಲಾರ
ಸ್ವೀಕಾರ ಸಿದ್ದನಿರು ಬದುಕಲಿ ಬರುವುದಕೆಲ್ಲಾ
ಏಳುಬಣ್ಣಮಿಳಿತವೇ ತರುವುದು ಸುಂದರ ಕಾಮನಬಿಲ್ಲ

ರಸಧಾರೆ – ೮೭೮

ಕಗ್ಗ ರಸಧಾರೆ

ಒಡೆಯದಿರು ತಳಹದಿಯ ಸರಿಪಡಿಪೆನದನೆಂದು ।
ಸಡಲಿಸುವ ನೀಂ ಮರಳಿ ಕಟ್ಟಲರಿತವನೇಂ ? ।।
ಗಿಡವ ಸರಿ ಬೆಳೆಯಿಸಲು ಬುಡವ ಕೀಳ್ವದು ಸರಿಯೇ? ।
ದುಡುಕದಿರು ತಿದ್ದಿಕೆಗೆ – ಮಂಕುತಿಮ್ಮ ।।

ಒಡೆಯದಿರು=ಒಡೆಯದೆ+ಇರು, ಸರಿಪಡಿಪೆನದನೆಂದು=ಸರಿಪಡಿಸುವೆ+ಅದನು+ಎಂದು, ಕಟ್ಟಲರಿತವನೇಂ=ಕಟ್ಟಲು+ಅರಿತವನೇಂ, ದುಡುಕದಿರು=ದುಡುಕದೆ+ಇರು

ತಳಹದಿ=ಅಡಿಪಾಯ, ಮೂಲಾಧಾರ, ದುಡುಕು=ಆತುರ, ತಿದ್ದಿಕೆಗೆ=ತಿದ್ದುವಿಕೆಗೆ

ಇರುವುದನ್ನು ಸರಿಪಡಿಸುವ ಭರಾಟೆಯಲ್ಲಿ ಅದರ ಅಡಿಪಾಯವನ್ನು ಅಲುಗಾಡಿಸಬೇಡ.ನಿನಗೆ ಮತ್ತೆ ಅದನ್ನು ಹಾಗೆ ಕಟ್ಟಲು ಗೊತ್ತಿದೆಯೇನು? ಒಂದು ಗಿಡವ ಸರಿಯಾಗಿ ಬೆಳೆಸಲು ಅದರ ಬೇರುಗಳನ್ನೇ ಕೀಳುವುದು ಸರಿಯೇ? ಹಾಗಾಗಿ ಇರುವುದನ್ನು ತಿದ್ದಲು ಆತುರಪಡಬೇಡ ಎಂದು ಒಂದು ಸೂಕ್ತ ಹಿತವಚನವನ್ನು ನೀಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

ತನ್ನ ಸುಖದ ಸಾಧನಗಳನ್ನು ಹೊಸದಾಗಿ ಸೃಷ್ಟಿಸುವುದು ಮತ್ತು ಇರುವುದನ್ನು ಸುಧಾರಿಸುವುದು ಮನುಷ್ಯನ ಜೀವನದಲ್ಲಿ ನಿರಂತರವಾಗಿ ನಡೆದೇ ಇದೆ ಅಲ್ಲವೇ? ಇರುವ ವಸ್ತುಗಳನ್ನೇ ಬೇರೆ ರೀತಿಯಲ್ಲಿ ಹೊಂದಿಸಿಕೊಂಡು ಮತ್ತು ಅದಕ್ಕೆ ಹೊಸ ಆಯಾಮವನ್ನು ಕೊಡುವುದು ಅಥವಾ ಇರುವುದರ ಜೊತೆಗೆ ಮತ್ತಷ್ಟನ್ನು ಜೋಡಿಸಿ ಹೊಸ ರೂಪ ಕೊಡುವುದು ಸಾಧ್ಯ. ಆದರೆ ಮೂಲ ವಸ್ತುವನ್ನೇ ನಾಶಮಾಡಿ ಹೊಸತನ್ನು ಕಂಡುಕೊಳ್ಳಲು ಸಾಧ್ಯವೇ? ಎಂದರೆ, ಖಂಡಿತ ಸಾಧ್ಯವಿಲ್ಲ.

ನಮ್ಮ ಬದುಕಿಗೆ ಆಧಾರವಾದ, ನಮ್ಮ ಪುರಾತನರು ಹಾಕಿಕೊಟ್ಟ ಜೀವನ ಶೈಲಿ, ಮೌಲ್ಯಗಳು, ಸಂಸ್ಕೃತಿ, ಸಂಸ್ಕಾರಗಳು, ಜ್ಞಾನದ ಹಲವು ಪ್ರಕಾರಗಳು, ಇವುಗಳೇ ನಮ್ಮ ಅಂದಿನ ಮತ್ತು ಇಂದಿನ ಬದುಕಿಗೆ ಅಡಿಪಾಯ. ಏಕೆಂದರೆ ಅವು ಮೂಲಭೂತ ಸತ್ಯಗಳು. ಅವುಗಳನ್ನು ಅಲುಗಾಡಿಸಿದರೆ ನಮ್ಮ ಇಡೀ ಅಸ್ತಿತ್ವವೇ ಅಲುಗಾಡಿ, ನಾವು ಖಂಡಿತ ಪತನವಾಗುತ್ತೇವೆ. ಅವಗಳನ್ನು ಆಧಾರವಾಗಿಟ್ಟುಕೊಂಡು ನಮ್ಮ ಜೀವನ ಶೈಲಿಗೆ ನಾವು ಹೊಸ ಹೊಸ ಆಯಾಮಗಳನ್ನು ಹಾಕಿಕೊಂಡು ಜೀವಿಸುತ್ತಿದ್ದೇವಲ್ಲ…

View original post 79 more words

ರಸಧಾರೆ – ೮೭೭

ಕಗ್ಗ ರಸಧಾರೆ

ಮತಿವಂತರಿದ್ದರಲ ನಮ್ಮ ಹಿಂದೆಯುಮಿಲ್ಲಿ ।
ಹಿತಚಿಂತಕರು ಜನಕೆ, ಕೃತಪರಿಶ್ರಮರು ।।
ಅತಿವೈದ್ಯದಿಂದ ಹೊಸರುಜಿನಕೆಡೆಯಾದೀತೋ ।
ಮಿತಿಯಿಂ ನವೀಕರಣ – ಮಂಕುತಿಮ್ಮ ।।

ಮತಿವಂತರಿದ್ದರಲ=ಮತಿವಂತರು+ಇದ್ದರು+ಎಲ, ಹಿಂದೆಯುಮಿಲ್ಲಿ=ಹಿಂದೆಯುಂ+ಇಲ್ಲಿ, ಹೊಸರುಜಿನಕೆಡೆಯಾದೀತೋ=ಹೊಸ+ರುಜಿನಕೆ+ಎಡೆಯಾದೀತೋ

ಮತಿವಂತರು=ಬುದ್ಧಿವಂತರು, ಕೃತಪರಿಶ್ರಮರು=ದುಡಿದವರು, ರುಜಿನ=ರೋಗ, ನವೀಕರಣ=ಹೊಸತನದನ್ವೇಷಣೆ

ಈ ಭೂಮಿಯಲ್ಲಿ ನಮಗಿಂತ ಹಿಂದೆ ಬುದ್ಧಿವಂತರು ಇದ್ದರಲ್ಲವೇ? ಸರ್ವ ಜನರ ಹಿತದ ಬಗ್ಗೆ ಚಿಂತೆಮಾಡುವವರು ಇದ್ದರಲ್ಲವೇ? ಜಗತ್ತಿನ ಒಳಿತಿಗಾಗಿ ದುಡಿದವರು ಇದ್ದರಲ್ಲವೇ? ಅತಿಯಾದ ವೈದ್ಯದಿಂದ ಹೊಸರೋಗಕ್ಕೆ ಎಣೆ ಮಾಡಿಕೊಟ್ಟಂತೆ, ಇರುವುದನ್ನು ಅತಿಯಾಗಿ, ತೀವ್ರತೆಯಿಂದ ಬದಲಿಸಿದೆ, ಮಿತಿಯಿಂದ ನವೀನತೆಯನ್ನು ಕಂಡುಕೊಳ್ಳಬೇಕು, ಎಂದು ಒಂದು ಸೂಚನೆ ಮತ್ತು ಒಂದು ಆದೇಶವನ್ನು ನೀಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

ಈ ಭೂಮಿಯ ಮೇಲೆ ಈ ಹಿಂದ ಬಂದು ಹೋದಂತಹ ಮಾನವರ ಬುದ್ಧಿವಂತಿಕೆಯಿಂದಲೇ, ಅಂದಿನ ಸ್ಥಿತಿ ಇಂದಿನವರೆಗೆ ಬದಲಾಗುತ್ತಾ ಬಂದು, ಇಂದಿನ ಹಂತ ತಲುಪಿದೆ ಮತ್ತು ಈ ಬದಲಾವಣೆ ನಿರಂತರವಾಗಿ ಸಹವಾಗಿ ಸಾಗುತ್ತಲೇ ಇದೆ. ಅಂತಹ ಬುದ್ಧಿವಂತರ ಸರ್ವ ಹಿತಕ್ಕಾಗಿಯ ಚಿಂತನೆ, ಆ ಚಿಂತನೆಯನ್ನು ಕೃತಿಯಲ್ಲಿ ಇಳಿಸಲು ಅವರುಗಳ ನಿಸ್ವಾರ್ಥ ಪರಿಶ್ರಮದಿಂದ ಮಾನವರ ಜೀವನದಲ್ಲಿ ಸುಖ ಮತ್ತು ಸಂತೋಷಗಳನ್ನು ಪಡೆಯಲು ಹಲವಾರು ಸಾಧನಗಳು ಮತ್ತು ಬದುಕುವ ವಿಧಾನಗಳ ಆವಿಷ್ಕಾರವಾಯಿತಲ್ಲವೇ? ಆದರೆ ಈ ಎಲ್ಲಾ ಆವಿಷ್ಕಾರಗಳೂ ಮನುಷ್ಯರಿಗೆ ಎಷ್ಟು ಒಳಿತಾಗಿಸಿದೆ ಮತ್ತು ಅವರ ಮನೋಭಾವವನ್ನು ಎಷ್ಟರಮಟ್ಟಿಗೆ ಸಕಾರಾತ್ಮಕವಾಗಿ ಬೆಳೆಸಲಾಗಿದೆ ಎನ್ನುವ ಪ್ರಶ್ನೆ, ಚಿಂತನೆಗೆ ಗ್ರಾಸವಾಗುತ್ತದೆ.

ಇದ್ದದ್ದನ್ನು ಬದಲಾಯಿಸುವ ಮನುಷ್ಯನ ಈ ಪ್ರಯತ್ನದಲ್ಲಿ ಹಳತನ್ನು ತೊಲಗಿಸಿ ಹೊಸತನ್ನು ಸೃಷ್ಟಿಸಿದಾಗ ಆ ಹೊಸತು ಕೇವಲ ಒಳಿತನ್ನೇ ಮಾಡುವುದಿಲ್ಲ, ಕೆಡುಕನ್ನೂ ಮಾಡುತ್ತದೆ ಎನ್ನುವ ಸಂದೇಹವೇ “ಅತಿವೈದ್ಯದಿಂದ ಹೊಸರುಜಿನಕೆಡೆಯಾದೀತೋ” ಎನ್ನುವಂತೆ ಹೇಳಲ್ಪಟ್ಟಿದೆ. ಮಾನವರು…

View original post 72 more words

ಮೂರು ಹೆಜ್ಜೆ

ಮೌನವೆನುವುದು ನೀನು
ನಿಶ್ಶಬ್ಧವೆನುವುದು ಜಗವು
ಧ್ಯಾನವೆನುವುದು ಪಟ್ಟು
ಸಕಲ ಸಮತೆಯ ಗುಟ್ಟು
                   -ಉದಕಜನ್ಯ

ಮೌನ ಎನ್ನುವುದು ನೀವು ಮಾತನಾಡುತಿಲ್ಲ ಎನ್ನುವುದನ್ನು ಸೂಚಿಸುತ್ತದೆ ಎ೦ದರೆ ಆ ಸ್ಥಿತಿ ನೀವು ಹೊ೦ದಿರುವ೦ತದ್ದು. ಅದೇ ನಿಶ್ಶಬ್ಧ ಎನ್ನುವುದು ನಿಮ್ಮ ಸುತ್ತಲಾರೂ(ಜಗತ್ತು) ಸತ್ತಮಾಡುತ್ತಿಲ್ಲ ಎನ್ನುವುದನ್ನು ಸೂಚಿಸುತ್ತದೆ ಇದು ನೀವು ಅನುಭವಿಸಬಹುದಾದ್ದು…ಇವೆರಡು ಇರಲಾಗಿ ಧ್ಯಾನ ಎನುವುದನ್ನು ಪಟ್ಟುಹಿಡಿದ೦ತೆ ಆಚರಿಸಿದರೆ ಮಾನಸಿಕ ಸಮತೋಲನವನ್ನೂ ತನ್ಮೂಲಕ ಜೀವನದ ಸಮತೋಲನವನ್ನೂ ಸಾಧಿಸಬಹುದು..

ತಿಳಿ ಬಾಣ

ಕೆಲವರಿಗೆ ನಾಟಲೆ೦ದೇ ಬರೆಯಬೇಕಾಗಬಹುದು
ಸ೦ದರ್ಬವದು ನು೦ಗಲೇಬೇಕು ದುಖಃ
ಕಡೆಗಣಿಸಿ ಹಠವಿಡಿವ ಮನದ ಸೊಕ್ಕ

ಕಳೆದುದರೆಡೆಗೆ ಎವೆ ಹಿಕ್ಕದಲೆ ನೋಡಿದೊಡೇನು
ಮರಳಿದವೇ ನಮ ಅಳಿದ ಭರತವರ್ಷದಾ ವೈಭವ
ಅಹುದಹುದು,ಇಹುದು ಭರವಸೆ
ಬದಲಿಸಲಿದೆ ನಮ ದೆಸೆ

ಕಣ್ಗಳಿರುವವು ಮು೦ದೆ ಭವಿಷ್ಯವೂ ಅಲ್ಲೆ
ಕಾಲ ಉರುಳಲಡಗುವುದು ಭೂತದ ಸೊಲ್ಲೆ

ಬದುಕುವ ವಾಸ್ತವವನರಿತು
ಚಿ೦ತಿಸುವ ಹೊಸದರ ಕುರಿತು
ಕಣ್ಣಾಲಿಗಳು ಮ೦ಜಾಗಲಿ ನಮಗಾಗಿಯಲ್ಲ
ಖುಷಿಯನೊತ್ತೊಯ್ವ ಜಗದ ಕೇರಿಗೆಲ್ಲ