ರೋದ್ನೆ

ನನ ಶ್ವಾಸದ ಜೊತೆ ಸೇರಿ
ಎದೆ ತಂತಿಯ ಜೊತೆಜಾರಿ
ಮಾತಿನ ತುಡಿತವ ಹಿಡಿಸಿ
ಮೌನಿಯಾದೆಯಾ

ನಗೆಯ ನಡುವೆಯ ನೆನಪು
ಉತ್ತರ ಹುಡುಕೊ ಬದುಕು

ದೀಪ್ತ ಚಂದಿರ ಕಂಗಳ
ಮುಂದಿರೊ ಆ ಮುಂಗುರುಳ
ಸರಿಸಿ ಬೆಳಗಬಾರದೇ ಬಾಳದಾರಿಯ

ಎಂದೋ ನಾಟಿದ ಆ ನೋಟದ
ಮೊನಚಿನ ಬಾಣ
ಇಂದಿಗು ಚಡಪಡಿಸುತಲೆ
ಪರಿತಪಿಸುತಿದೆ ಪ್ರಾಣ

ಬಾನಲಿ ತೇಲುತಲಿದ್ದೆ
ರೆಕ್ಕೆ ಬಡಿಯದಲೆ ಅಂದು
ತವಕವು ಮೇಲೇಳಲು
ಹೃದಯವೆ ಶಿಖರವು ಇಂದು

ಮನದ.. ವನದ.. ದಹನ..
ಆ ಜವರಾಯನ ಆಗಮನ..

This is an incomplete ರೋದ್ನೆ.. cringe overloaded..

Leave a comment