ಮೂರು ಹೆಜ್ಜೆ

ಮೌನವೆನುವುದು ನೀನು
ನಿಶ್ಶಬ್ಧವೆನುವುದು ಜಗವು
ಧ್ಯಾನವೆನುವುದು ಪಟ್ಟು
ಸಕಲ ಸಮತೆಯ ಗುಟ್ಟು
                   -ಉದಕಜನ್ಯ

ಮೌನ ಎನ್ನುವುದು ನೀವು ಮಾತನಾಡುತಿಲ್ಲ ಎನ್ನುವುದನ್ನು ಸೂಚಿಸುತ್ತದೆ ಎ೦ದರೆ ಆ ಸ್ಥಿತಿ ನೀವು ಹೊ೦ದಿರುವ೦ತದ್ದು. ಅದೇ ನಿಶ್ಶಬ್ಧ ಎನ್ನುವುದು ನಿಮ್ಮ ಸುತ್ತಲಾರೂ(ಜಗತ್ತು) ಸತ್ತಮಾಡುತ್ತಿಲ್ಲ ಎನ್ನುವುದನ್ನು ಸೂಚಿಸುತ್ತದೆ ಇದು ನೀವು ಅನುಭವಿಸಬಹುದಾದ್ದು…ಇವೆರಡು ಇರಲಾಗಿ ಧ್ಯಾನ ಎನುವುದನ್ನು ಪಟ್ಟುಹಿಡಿದ೦ತೆ ಆಚರಿಸಿದರೆ ಮಾನಸಿಕ ಸಮತೋಲನವನ್ನೂ ತನ್ಮೂಲಕ ಜೀವನದ ಸಮತೋಲನವನ್ನೂ ಸಾಧಿಸಬಹುದು..

ತಿಳಿ ಬಾಣ

ಕೆಲವರಿಗೆ ನಾಟಲೆ೦ದೇ ಬರೆಯಬೇಕಾಗಬಹುದು
ಸ೦ದರ್ಬವದು ನು೦ಗಲೇಬೇಕು ದುಖಃ
ಕಡೆಗಣಿಸಿ ಹಠವಿಡಿವ ಮನದ ಸೊಕ್ಕ

ಕಳೆದುದರೆಡೆಗೆ ಎವೆ ಹಿಕ್ಕದಲೆ ನೋಡಿದೊಡೇನು
ಮರಳಿದವೇ ನಮ ಅಳಿದ ಭರತವರ್ಷದಾ ವೈಭವ
ಅಹುದಹುದು,ಇಹುದು ಭರವಸೆ
ಬದಲಿಸಲಿದೆ ನಮ ದೆಸೆ

ಕಣ್ಗಳಿರುವವು ಮು೦ದೆ ಭವಿಷ್ಯವೂ ಅಲ್ಲೆ
ಕಾಲ ಉರುಳಲಡಗುವುದು ಭೂತದ ಸೊಲ್ಲೆ

ಬದುಕುವ ವಾಸ್ತವವನರಿತು
ಚಿ೦ತಿಸುವ ಹೊಸದರ ಕುರಿತು
ಕಣ್ಣಾಲಿಗಳು ಮ೦ಜಾಗಲಿ ನಮಗಾಗಿಯಲ್ಲ
ಖುಷಿಯನೊತ್ತೊಯ್ವ ಜಗದ ಕೇರಿಗೆಲ್ಲ

ರಸಧಾರೆ – ೮೬೯

ಕಗ್ಗ ರಸಧಾರೆ

ಮಾರ್ಗಣೆಯೆ ಮುಖ್ಯ; ಲಭ್ಯದ ಮಾತದಂತಿರಲಿ ।
ಸ್ವರ್ಗವನು ಭುವಿಗಿಳಿಸಬಲ್ಲವನದಾರು ? ।।
ಅರ್ಗಲ ವಿಹೀನ ಸರ್ವಾರ್ಥ ಸಹಭಾಗಿತೆಯೆ ।
ಅರ್ಘಾರ್ಹ ತತ್ವವೆಲೊ – ಮಂಕುತಿಮ್ಮ ।।

ಮಾತದಂತಿರಲಿ=ಮಾತು+ಅದು+ಅಂತಿರಲಿ, ಭುವಿಗಿಳಿಸಬಲ್ಲವನದಾರು=ಭುವಿಗೆ+ಇಳಿಸಬಲ್ಲವನು +ಅದು+ಯಾರು?

ಮಾರ್ಗಣೆ =ಹುಡುಕಾಟ, ಭುವಿ=ಭೂಮಿ, ಅರ್ಗಲ ವಿಹೀನ+ ಅಡೆ-ತಡೆಯಿಲ್ಲದ, ಅರ್ಘಾರ್ಹ=ಅತ್ಯುತ್ತಮ.

ಎಲ್ಲರೂ ಎಲ್ಲಾ ಕಾಲಕ್ಕೂ ಸುಖದ ಸಾಧನಗಳನ್ನು ಹುಡುಕುವುದೇ ಮುಖ್ಯ. ಅದರಿಂದ ಏನು ಸಿಕ್ಕಿತು ಅಥವಾ ಇಲ್ಲ ಎನ್ನುವ ಮಾತು ಒತ್ತಟ್ಟಿಗಿರಲಿ. ಎಲ್ಲಾ ಸುಖಗಳ ತಾಣವಾದ ಸ್ವರ್ಗವನು ಈ ಭೂಮಿಯಮೇಲೆ
ತರಬಲ್ಲವನು ಯಾರು? ಜಗತ್ತಿನಲ್ಲಿರುವ ಸುಖಸಾಧನಗಳನ್ನು, ಅಬಾಧಿತವಾಗಿ ಅಡೆತಡೆಯಿಲ್ಲದೆ ಸಮಾನವಾಗಿ ಎಲ್ಲರೂ ಹಂಚಿಕೊಂಡು ಬಾಳುವುದೇ ಅತ್ಯುತ್ತಮ ತತ್ವ ಎನ್ನುತ್ತಾರೆ, ಸನ್ಮಾನ್ಯ ಗುಂಡಪ್ಪನವರು.

ಅನಾದಿ ಕಾಲದಿಂದಲೂ ಮಾನವರು ಜಗತ್ತಿನಾದ್ಯಂತ, ತಮ್ಮ ಸುಖಸಾಧನಗಳನ್ನು ಹುಡುಕುತ್ತಲೇ ಇದ್ದಾರೆ. ಅವರು ಹುಡುಕುವ ವಸ್ತು ಅವರಿಗೆ ಸಿಕ್ಕಿಲ್ಲವೆಂದಲ್ಲ. ಆದರೆ ಮನುಷ್ಯನಿಗೆ ಮತ್ತಷ್ಟರಾಸಯಿಂದ ತೃಪ್ತಿ ಸಿಕ್ಕಿಲ್ಲ. ಹಾಗೆ ಇವನು ಬಯಸಿದ ಸಕಲವೂ ಬಯಸಿದಾಕ್ಷಣ ಸಿಕ್ಕಿಬಿಟ್ಟರೆ ಇವನನ್ನು ಹಿಡಿದು ನಿಲ್ಲಿಸುವರಾರು ? ಹಾಗಾಗಿ ಇವನ ಹುಡುಕಾಟ ನಿರಂತರ. ಭೂಮಿಯಮೇಲಿನ ಸುಖಗಳೆಲ್ಲವನ್ನೂ ತಂದುಕೊಟ್ಟು ಈ ಭೂಮಿಯನ್ನು ಸ್ವರ್ಗದಂತೆ ಮಾಡುವವರು ಯಾರೂ ಬಂದಿಲ್ಲ, ಬರುವುದೂ ಇಲ್ಲ. ಏಕೆಂದರೆ ಮನುಷ್ಯನ ಆಸೆಗಳಿಗೆ ಕೊನೆಯೇ ಇಲ್ಲ.

ಮನುಷ್ಯ ಬಯಸಿದ ಸುಖ ಸಾಧನಗಳು ಸಿಕ್ಕಿಲ್ಲವೇ ಎಂದರೆ, ಸಿಕ್ಕಿವೆ ಆದರೆ ಅವು ಸಂಪೂರ್ಣ ತೃಪ್ತಿಯನ್ನು ಕೊಟ್ಟಿಲ್ಲ. ಆದರೆ ಸಿಕ್ಕ ಸುಖಗಳನ್ನು ಮತ್ತು ಆ ಸುಖದ ಸಾಧನಗಳನ್ನು ಎಲ್ಲರಿಗೂ ತಲುಪುವಂತೆ ಮಾಡಿ ಎಲ್ಲರಿಗೂ ಆ ಸುಖದಲ್ಲಿ ಸಹಭಾಗಿತ್ವವನ್ನು ನೀಡುವಂತಹ ಮನೋಭಾವವನ್ನು ಎಲ್ಲರೂ ಬೆಳೆಸಿಕೊಳ್ಳುವುದು ಅತ್ಯುತ್ತಮ ವಿಚಾರ. ಆದರೆ ಅದು ಸಾಧ್ಯವೇ? ಬುದ್ಧಿಶಕ್ತಿಯ, ಜ್ಞಾನದ…

View original post 68 more words